14th February 2025
ಫೆ.15ರಂದು ಕೆ.ಬಿ.ಜಯಣ್ಣನವರಿಗೆ ಅಭಿನಂದನೆ ಮತ್ತು ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ
ತುಮಕೂರು:ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರೂ,ಶಿಕ್ಷಣ ತಜ್ಞ,ಶಿಕ್ಷಕ,ಶಿಕ್ಷಣ ಪ್ರೇಮಿ,ಸಮಾಜಸೇವಕರೂ ಆದ ಕೆ.ಬಿ.ಜಯಣ್ಣನವರಿಗೆ ಅಭಿನಂದನೆ ಮತ್ತು ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ ನಾಳೆ(ಶನಿವಾರ) ಬೆಳಿಗ್ಗೆ 10:30ಕ್ಕೆ ಕುವೆಂಪುನಗರದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ.
ಅಭಿನಂದನೆ ಮತ್ತು ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ವಹಿಸುವರು,ಗೃಹ ಸಚಿವ ಡಾ||ಜಿ.ಪರಮೇಶ್ವರ್ ಉದ್ಘಾಟಿಸುವರು,ಗ್ರಂಥ ಲೋಕಾರ್ಪಣೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ನೆರವೇರಿಸುವರು,ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಣ್ಯರನ್ನು ಸನ್ಮಾನಿಸುವರು,ಡಾ||ಸಿ.ಸೋಮಶೇಖರ್ ರವರು ಅಭಿನಂದನಾ ನುಡಿಯನ್ನು ಆಡಲಿದ್ದಾರೆ,ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು,ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉಪಸ್ಥಿತರಿರುವರು,ಮುಖ್ಯ ಅತಿಥಿಗಳಾಗಿ ಶಾಸಕ ಸುರೇಶ್ ಗೌಡ, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಂ.ಎಲ್.ಸಿ.ಗಳಾದ ಡಿ.ಟಿ.ಶ್ರೀನಿವಾಸ್, ಚಿದಾನಂದ್ ಗೌಡ, ಸೊಗಡುಶಿವಣ್ಣ, ಜಿ.ಎಸ್.ಬಸವರಾಜು, ರಾಜೇಂದ್ರರಾಜಣ್ಣ, ವೈ.ಎ.ನಾರಾಯಣಸ್ವಾಮಿ, ಎಂ.ಆರ್.ಹುಲಿನಾಯ್ಕರ್, ಉಪಸ್ಥಿತರಿರುವರು ಆದ್ದರಿಂದ ಎಲ್ಲ ಕೆ.ಬಿ.ಜಯಣ್ಣನವರ ಅಭಿಮಾನಿಗಳು,ಹಳೆಯ ವಿದ್ಯಾರ್ಥಿಗಳು,ಸಂಘ-ಸAಸ್ಥೆಗಳ ಪದಾಧಿಕಾರಿಗಳು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ರವರು ಮನವಿ ಮಾಡಿದ್ದಾರೆ.